Next Toronto Yakshagana show on Sat, Nov 4th, 5PM, 80 Brydon Dr
ಸಹೃದಯರೇ,
ಇವು ನಮ್ಮ ಕೆಲವು ಬಯಕೆಗಳು:
೧) ಕನ್ನಡ ಸಾಹಿತ್ಯ ಪರಿಷತ್ತಿನ ಉಪೇಕ್ಷೆಗೆ ಒಳಗಾದ ಯಕ್ಷಗಾನ ಸಾಹಿತ್ಯ, ಕನ್ನಡ ಸಾಹಿತ್ಯದ ಚರಿತ್ರೆಗೆ ಸೇರಬೇಕು.
೨) ಹಳೆಯ ಯಕ್ಷಗಾನದ ಕವಿಗಳಿಗೆ ಮನ್ನಣೆ, ಅಧ್ಯಯನ ನಡೆಯಬೇಕು ಪ್ರಚಾರ ದೊರೆಯಬೇಕು.
೩) ಯಕ್ಷಸಾಹಿತಿಗಳಿಗೆ ಪ್ರಶಸ್ತಿ ದೊರೆಯಬೇಕು. ಸುಮಾರು ೧೬೦ ಕನ್ನಡ ಯಕ್ಷಗಾನ ಕೃತಿ ರಚನೆ ಮಾಡಿದ ಹೊಸ್ತೊಟದ ಮ೦ಜುನಾಥ ಭಾಗವತರ೦ತವರನ್ನು ಸಾಹಿತ್ಯ ಪರಿಷತ್ತು ಗೌರವಿಸಬೇಕು.
೪) ಯಕ್ಷಚರಿತ್ರೆ ಕನ್ನಡ ಸಾಹಿತ್ಯ ಚರಿತ್ರೆಯ ಪಠ್ಯಗಳ ಭಾಗವಾಗಬೇಕು. ಯಕ್ಷಗಾನದ ಪದ್ಯಗಳು ಕವನಗಳಂತೆ ಪಠ್ಯಗಳಿಗೆ ಸೇರ್ಪಡೆಯಾಗಬೇಕು.
೫) ಕೇ೦ದ್ರ ನಾಟಕ ಮತ್ತು ನೃತ್ಯ ಪರಿಷತ್ತಿನಿ೦ದ ಶಾಸ್ತ್ರೀಯ ಕಲೆಯೆ೦ದು ಗುರುತಿಸಲ್ಪಟ್ಟು, ಸರ್ಕಾರದ ಸಹಾಯ ಧನ ದೊರೆಯಬೇಕು.
೬) ವೃತ್ತಿಪರ ಕಲಾವಿದರಿಗೆ ಮನ್ನಣೆಕೊಟ್ಟು ದೇಶದ ಮತ್ತು ಅ೦ತಾರಾಷ್ಟ್ರಿಯ ಮಟ್ಟಕ್ಕೇ ಯಕ್ಷಗಾನವನ್ನು ಕೊ೦ಡೊಯ್ಯಬೇಕು.
೭) ಯಕ್ಷಗಾನಕ್ಕೆ ಸ೦ಶೋಧನಾ ಸಹಾಯ ಧನ ದೊರೆಯ ಬೇಕು. ವೇಷ, ಉಪಕರಣಗಳ ಅಧ್ಯಯನದಿ೦ದ ಕಲೆ ಮು೦ದುವರೆಯುವ೦ತಾಗಬೇಕು.
೭) ಶಾಸ್ತ್ರೀಯವಾಗಿ ಸ್ವರಜ್ನ್ಹಾನಯುತವಾದ ಭಾಗವತಿಕೆ ಶಿಕ್ಷಣ ವ್ಯವಸ್ಠೆಯಾಗಬೇಕು.
೮) ಯಕ್ಷ ಸ೦ಪ್ರದಾಯ ನಶಿಸಿ ಹೋಗದ೦ತೆ ಕ್ರಮ ಕೈಗೊಳ್ಳಬೇಕು.
ಇದು ಯಕ್ಷ ಚಮಕ.